ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಯನಹಳ್ಳಿಯಲ್ಲಿ ರೌಡಿಶೀಟರ್ ಅಜಯ್ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇತ್ತೀಚೆಗೆ ಬನ್ನೇರುಘಟ್ಟ ಸಮೀಪ ಅಜಯ್ ಅಂಡ್ ಗ್ಯಾಂಗ್ ಚಾಲಕ ಚೇತನ್ ಎಂಬಾತನನನ್ನು ಕಿಡ್ನ್ಯಾಪ್ ಮಾಡಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಆತನಿಗೆ ಎರಡು ದಿನಗಳ ಕಾಲ ಚಿತ್ರ ಹಿಂಸೆಯ ನೀಡಲಾಗಿತ್ತು. ಹೀಗಾಗಿ ಇಂದು ಅಜಯ್ ನನ್ನ ನಾಯನಹಳ್ಳಿ ಬಂಧಿಸಲು ಹೋದಾಗ ಕ್ರೈಂ ಸಿಬ್ಬಂದಿ ಮಹೇಶ್ ಎಂಬುವವರಿಗೆ ಅಜಯ್ ಹಲ್ಲೆ ಮಾಡಿದ್ದಾನೆ.