ಮೈಸೂರು : ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಮೈಸೂರಿಗೂ ಕಾಲಿಟ್ಟಿದ್ದು, ವಿದೇಶದಿಂದ ಬಂದಿದ್ದ ಬಾಲಕಿಯಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ತತ್ತರಿಸಿದ್ದ ಮೈಸೂರು ಈಗತಾನೇ ಚೇತರಿಸಿಕೊಳ್ಳುತ್ತಿದೆ. ಆದರೆ ಈಗ ಅರಮನೆ ನಗರಿಯಲ್ಲಿ ಓಮಿಕ್ರಾನ್ ಆತಂಕ ಶುರುವಾಗಿದೆ. ವಿದೇಶದಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಓಮಿಕ್ರಾನ್ ದೃಢವಾಗಿತ್ತು.ಬಾಲಕಿಯು ಸ್ವಿಜರ್ಲೆಂಡ್ನಿಂದ ಮೈಸೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಪಾಸಿಟಿವ್ ಬಂದಿದ್ದರಿಂದ,