ಕೋಲಾರದಲ್ಲಿ ಕೊರೊನಾಗೆ ಮೊದಲ ಬಲಿ; 43 ವರ್ಷದ ಮಹಿಳೆ ಸಾವು

ಕೋಲಾರ| pavithra| Last Updated: ಶುಕ್ರವಾರ, 26 ಜೂನ್ 2020 (11:36 IST)
ಕೋಲಾರ: ಕೋಲಾರದಲ್ಲಿ ಕೊರೊನಾ ಮೊದಲ ಬಲಿ ಪಡೆದುಕೊಂಡಿದೆ. 43 ವರ್ಷದ ಮಹಿಳೆ ಕೊರೊನಾದಿಂದ ಸಾವನಪ್ಪಿದ್ದಾರೆ.

ಕೆಜಿಎಫ್ ತಾಲೂಕಿನ ತೂಕಲು ಗ್ರಾಮದ ಮಹಿಳೆ ದೆಹಲಿಯಿಂದ ಮದುವೆಗೆಂದು ಕೋಲಾರಕ್ಕೆ ಬಂದಿದ್ದರು . ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ಆಕೆಗೆ ಕೊರೊನಾ ಇರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಹಿಳೆ ಸಾವನಪ್ಪಿದ್ದಾರೆ. ಆ ಮೂಲಕ ಕೋಲಾರದಲ್ಲಿ ಕೊರೊನಾಗೆ ಮೊದಲಿ ಬಲಿಯಾದಂತಾಗಿದೆ.


ಇದರಲ್ಲಿ ಇನ್ನಷ್ಟು ಓದಿ :