ಪತಿ ಕೊಲೆ ಮಾಡಿದ ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ, ಶನಿವಾರ, 9 ಫೆಬ್ರವರಿ 2019 (18:45 IST)

ಪತಿಯನ್ನು ಕೊಲೆ ಮಾಡಿದ ಪತ್ನಿ ಸೇರಿದಂತೆ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಲಬುರಗಿ ಭರತ ನಗರ ತಾಂಡಾದ ಹತ್ತಿರ 2017 ರಲ್ಲಿ  ನಡೆದ ಸೈಯ್ಯದ್ ಮಸ್ತಾನ ಎಂಬಾತನ ಕೊಲೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ 3ನೇ ಅಪ್ಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸೈಯ್ಯದ್ ಆಸೀಫ್, ಸೈಯ್ಯದ್ ಮುಬಿನ್ ಮತ್ತು ಮಹ್ಮದ್ ಯುಸೂಫ್, ಕೊಲೆಗೆ ಪ್ರಚೋದನೆ ನೀಡಿದ ಪತ್ನಿ ಅಜ್ಮತ್ ನಾಜನೀನ್, ಖಮರ್ ಸುಲ್ತಾನ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಕೊಲೆಯಾದ ಸೈಯ್ಯದ ಮಸ್ತಾನ ಅಜ್ಮತ್ ನಾಜನೀನ್ ಜೊತೆ ಮದುವೆಯಾಗಿದ್ದ. ಮದುವೆಯಾದ ನಂತರ ಸೈಯ್ಯದ್ ಮಸ್ತಾನ್ ಅಜ್ಮತ್ ನನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಕಾರಣಕ್ಕೆ ಆತನನ್ನು ಭರತ ನಗರ ತಾಂಡಾ ಹತ್ತಿರ ಕಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್.,  ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೆಡಿಎಸ್ ಶಾಸಕನ ವಿರುದ್ಧ ಬಿಜೆಪಿ ಮುಖಂಡ ವಾಗ್ದಾಳಿ

ಜೆಡಿಎಸ್ ಶಾಸಕರೊಬ್ಬರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡೆಸಿದ್ದಾರೆ.

news

ರಮೇಶ್ ಮುಂಬೈನಲ್ಲಿದ್ದಾರೆ ಎಂದ ಸಚಿವ ಸತೀಶ್!

ಸಚಿವ ಸ್ಥಾನದಿಂದ ವಂಚಿತರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈನಲ್ಲಿದ್ದಾರೆ. ಹೀಗಂತ ಅವರ ಸಹೋದರ ಹಾಗೂ ...

news

ನೂತನ ತಾಲೂಕು ಘೋಷಣೆ ಆಗ್ರಹ: ಬಂದ್ ಸಂಪೂರ್ಣ ಯಶಸ್ವಿ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ಬಜೆಟ್ ಮಂಡನೆಯಲ್ಲಿಯಲ್ಲಿ ತಮ್ಮ ಪಟ್ಟಣವನ್ನು ...

news

ತಿಪ್ಪರಲಾಗಾ ಹಾಕಿದರೂ ಸರಕಾರ ಬದಲಾಗೊಲ್ಲ ಎಂದವರಾರು?

ಬಿಜೆಪಿಯ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ತಿಪ್ಪರಲಾಗಾ ಹಾಕಿದರೂ ರಾಜ್ಯ ಸರಕಾರ ಬದಲಾಗೋದಿಲ್ಲ ಎಂದು ...