ಸಿಸಿಬಿ ಪೊಲೀಸರಿಗೆ ಅದೊಂದು ಮಾಹಿತಿ ಬಂದಿತ್ತು.. ಕೇಂದ್ರದ ತನಿಖಾ ಸಂಸ್ಥೆಯ ಅದೊಂದೇ ಒಂದು ಇನ್ಫಾರ್ಮೇಶನ್ ಇಡೀ ಬೆಂಗಳೂರನ್ನೇ ಇಂದು ಸೇಫ್ ಮಾಡಿದೆ.. ಬೆಂಗಳೂರನ್ನ ಟಾರ್ಗೆಟ್ ಮಾಡಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಐವರು ಶಂಕಿಯ ಉಗ್ರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಆರ್ ಟಿ ನಗರ, ಹೆಬ್ಬಾಳ, ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಸುಹೇಲ್, ಉಮರ್, ಜಾಹಿದ್, ಮುದಾಸಿರ್, ಫೈಜರ್ ಎಂಬ ಐವರು ಶಂಕಿತ ಉಗ್ರರನ್ನ ಸಿಸಿಬಿ ಟೀಂ ಬಂಧಿಸಿದೆ.