ಬಹು ನಿರೀಕ್ಷಿತ ಬಿಆರ್ ಟಿಎಸ್ ಯೋಜನೆ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿಆರ್ ಟಿಎಸ್ ಯೋಜನೆಯನ್ನು ನವೆಂಬರ್ 15 ರ ನಂತರ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ. ಆ ನಿಟ್ಟಿನಲ್ಲಿ ಬಾಕಿ ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಹೀಗಂತ ಎಚ್ ಡಿಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ ಹೇಳಿದ್ದಾರೆ. ಬಿಆರ್ ಟಿಎಸ್ ಮಾರ್ಗದ ಧಾರವಾಡದ ಟೋಲ್ ನಾಕಾ, ಎಡಿಎಂ, ಎಪಿಎಂಸಿ ಬಳಿ ನೀರು ನಿಲ್ಲುತ್ತಿದೆ. ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ