ಕೃಷ್ಣಾ ನದಿ ತೀರದಲ್ಲಿ ಈಗ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನದಿ ತೀರದ ಕೆಲವು ಹಳ್ಳಿಗಳಿಗೆ ಸಂಚಾರ ಕಟ್ ಆಗಿದೆ. ಬಹುತೇಕ ಗ್ರಾಮಗಳ ಜನರು ನದಿ ನೀರಿನಲ್ಲಿಯೇ ಈಜಿ ದಡ ಸೇರಿ ಜೀವ ಉಳಿಕೊಳ್ಳುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ನೀಲಕಂಟರಾಯನಗಡ್ಡಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಈಜುಕಾಯಿ ಮೂಲಕ ನದಿ ದಡವನ್ನು ಗ್ರಾಮಸ್ಥರು ಸೇರುತ್ತಿದ್ದಾರೆ. ಸುರಪುರ ತಾಲೂಕಿನ ಕಕ್ಕೇರಾ ಸಮೀಪದ ನೀಲಕಂಟರಾಯನಗಡ್ಡಿ ಗ್ರಾಮದಲ್ಲಿ ಈಗ ಪ್ರವಾಹ ಭೀತಿ