ಲಾಲ್ ಬಾಗ್ ಅಂದಾಕ್ಷಣ ನೆನಪಾಗೋದು ಫ್ಲವರ್ ಶೋ..ಇಂದು ಫ್ಲವರ್ ಶೋಗೆ ಚಾಲನೆ ಸಿಕ್ಕಿದ್ದು,ಲಾಲ್ ಬಾಗ್ ನಲ್ಲಿ ಹೂಗಳ ಲೋಕವೇ ಧರೆಗಿಳಿದಿದೆ ಒಂದೆಡೆ ಕೆಂಪೇಗೌಡರ ಗಡಿ ಗೋಪುರ,ಮತ್ತೊಂದೆಡೆ ಇಸ್ರೋ,ಇನ್ನೊಂದೆಡೆ ಹೈಕೋರ್ಟ್, ಕಾಡುಮಲ್ಲೇಶ್ವರ,ದೊಡ್ಡ ಬಸವಣ್ಣ ಒಂದೋ ಎರಡಾ ಇಡೀ ಬೆಂಗಳೂರನ್ನು ಹೂ ರಾಣಿಯರ ನಡುವೆ ಅರಳಿಸೋ ಪ್ರಯತ್ನವನ್ನು ಈ ಬಾರಿಯ ಫ್ಲವರ್ ಶೋ ಮಾಡಿದೆ.ಎಸ್ ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ ಇಂದಿನಿಂದ ಜನವರಿ 30 ರವರಗೆ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದೆ.ನಗರದ