ರಾಜ್ಯದ ಕರಾವಳಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿದೆ. ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿ ಅಂದಾಜು ಸುಮಾರು 100 ಕೋಟಿ ರೂ. ನಷ್ಟ ಆಗಿರ ಬಹುದೆಂದು ಅಂದಾಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಹಳ್ಳಿಗೆ ಹೋದರೂ ಕೊಳೆ ರೋಗ ಬಗ್ಗೆ ಚರ್ಚೆ ಆಗುತ್ತಿದೆ. ತೋಟದಲ್ಲಿ ಸಣ್ಣ ಅಡಿಕೆಗಳು ರಾಶಿ ಬಿದ್ದಿವೆ. ಮಳೆಯಿಂದ ಒದ್ದೆ ಆಗಿರುವ ಈ ಅಡಿಕೆಯನ್ನು