Widgets Magazine

ಸಾವಿರಾರು ಅರ್ಚಕರಿಗೆ ಆಹಾರ ಪಡಿತರ ಕಿಟ್

ರಾಮನಗರ| Jagadeesh| Last Modified ಶನಿವಾರ, 16 ಮೇ 2020 (21:07 IST)
ಧಾರ್ಮಿಕ ಸಂಸ್ಥೆಗಳ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಪಡಿತರ ಕಿಟ್ ವಿತರಣೆ ಮಾಡಲಾಗಿದೆ.

ರಾಮನಗರ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ರಾಮನಗರ ಜಿಲ್ಲೆಯ ಸಿ ವರ್ಗಕ್ಕೆ ಸೇರಿದ 855 ಧಾರ್ಮಿಕ ಸಂಸ್ಥೆಗಳಲ್ಲಿರುವ 1099 ಅರ್ಚಕರು ಮತ್ತು ಇತರೆ ಸಿಬ್ಬಂದಿಗಳಿಗೆ ಆಹಾರದ ಪಡಿತರ ಕಿಟ್‌ನ್ನು ತಾಲ್ಲೂಕು ತಹಶೀಲ್ದಾರ್ ಮೂಲಕ ವಿತರಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ, ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ಭಕ್ತಾದಿಗಳು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಅರ್ಚಕರ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಹಾರದ ಪಡಿತರ ಕಿಟ್ ವಿತರಿಸಲಾಯಿತು.


ಇದರಲ್ಲಿ ಇನ್ನಷ್ಟು ಓದಿ :