ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗಳು ಮಾತ್ರವಲ್ಲ. ಎಲ್ಲಾ ಚುನಾವಣೆಗಳು ನನಗೆ ಪ್ರತಿಷ್ಠೆಯ ಚುನಾವಣೆಗಳಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದಗಂಗಾ ಶ್ರೀಗಳ 110ನೇ ಜನ್ಮದಿನದ ಅಂಗವಾಗಿ ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಮಾತ್ರ ಪ್ರತಿಷ್ಠೆಯ ಚುನಾವಣೆಯಲ್ಲ. ಪ್ರತಿಯೊಂದು ಚುನಾವಣೆ ನನ್ನ ಪಾಲಿಗೆ ಪ್ರತಿಷ್ಠೆಯದ್ದಾಗಿರುತ್ತದೆ ಎಂದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸುತ್ತದೆ. ಉಪಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆ