ಬೆಂಗಳೂರು: ರಾಜ್ಯಸಭೆಗೆ ಟಿಕೆಟ್ ನೀಡಲು ರಮೇಶ್ ಕತ್ತಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ಬೆಂಗಳೂರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಪ್ರಯಾಣ ಬೆಳೆಸಿದ್ದಾರೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆ ಅವರ ಅಧಿಕಾರ ಅವಧಿ ಜೂ25ಕ್ಕೆ ಅಂತ್ಯವಾಗಲಿದೆ. ಮತ್ತೆ ರಾಜ್ಯಸಭಾ ಟಿಕೆಟ್ ಗಾಗಿ ಪ್ರಭಾಕರ್ ಕೋರೆ ಲಾಬಿ ನಡೆಸುತ್ತಿದ್ದು, ಅದಕ್ಕಾಗಿ ಬೆಳಿಗ್ಗೆ 6ಕ್ಕೆ ಬೆಳಗಾವಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಪ್ರಭಾಕರ್ ಕೋರೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆ