ಧಾರವಾಡ : ಜಿಲ್ಲೆಯಲ್ಲಿ ಆರಂಭವಾಗಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಕ್ಯಾಂಪಸ್ಗೆ ಇದೇ ತಿಂಗಳ 28ರಂದು ಶಂಕು ಸ್ಥಾಪನೆ ನಡೆಯಲಿದೆ.ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ ಮತ್ತೊಂದು ಹೆಮ್ಮೆಯ ಗರಿ ಬರಲಿದೆ. ಈಗಾಗಲೇ ಧಾರವಾಡದಲ್ಲಿ ಕರ್ನಾಟಕ ವಿವಿ, ಕಾನೂನು ವಿವಿ, ಕೃಷಿ ವಿವಿ ಇವೆ.ಇದರ ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡಾ ಬಂದಿವೆ. ಈಗ ಫಾರೆನ್ಸಿಕ್ ಯುನಿವರ್ಸಿಟಿ ಕ್ಯಾಂಪಸ್ ಧಾರವಾಡದಲ್ಲಿ ಆರಂಭವಾಗಲಿದೆ.ಗುಜರಾತಿನಲ್ಲಿ ಫಾರೆನ್ಸಿಕ್ ವಿಶ್ವವಿದ್ಯಾಲಯ ಇದೆ. ಇದರ ಕ್ಯಾಂಪಸ್ ಇದೇ ಮೊದಲು