ಕರ್ನಾಟಕ ವಿಧಾನ ಮಂಡಲದಲ್ಲಿ ಕಂಡು ಕೇಳರಿಯದ ಅಮಾನತು ಮಾಡುವ ಕೆಲಸ ಆಗಿದೆ.ಸದನದಲ್ಲಿ ನಡೆದ ಎಲ್ಲಾ ವಿಚಾರ ರಾಜ್ಯಪಾಲರಿಗೆ ತಿಳಿಸಿದ್ದೇವೆ.ಜೈನ ಮುನಿ ಹತ್ಯೆ ಇಂದ ಇಡಿದು ಈವರೆಗಿನ ಎಲ್ಲಾ ಚರ್ಚೆ ಹೇಳಿದ್ದೇವೆ.ಬರಗಾಲ ಇದೆ, ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡುವಂತೆ ಕೇಳಿದ್ದೇವೆ ಈವರೆಗೂ ಆಗಿಲ್ಲ.ಈ ಶಿಷ್ಟಾಚಾರ ಬಗ್ಗೆ ಮಾತನಾಡಿದಾಗ ಸರ್ಕಾರದ ರೀತಿ, ಸ್ಪೀಕರ್ ಧ್ವನಿಗೂಡಿಸಿದ್ರು.ವಿಪಕ್ಷಗಳ ಧ್ವನಿ ಅಡಗಿಸೋ ಕೆಲಸ ಮಾಡಿದೆ.ಬಹಳ ಕಠಿಣ ನಿರ್ಣಯ ಮಾಡಿ ಹೊರಗೆ ಹಾಕಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.