ಕೊರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೆರೆ ಕಾಮೇಗೌಡರ ಪರವಾಗಿ ಮಾಜಿ ಸಿಎಂ ಬ್ಯಾಟ್ ಬೀಸಿದ್ದಾರೆ. ಕೊರೊನಾ ಬಂದಿದ್ದರೂ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಅಂತ ಕಾಮೇಗೌಡರು ಅನ್ನಾಹಾರ ತ್ಯಜಿಸಿದ್ದಾರೆ. ಕೆರೆ ಕಾಮೇಗೌಡರ ಪರಿಸ್ಥಿತಿ ಗಂಭೀರವಾಗಿದ್ದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಗಳಿ ಹೊನ್ನ ಶೂಲಕ್ಕೆ ಏರಿಸಿರುವ ಸಿಎಂ ಒಳ್ಳೆಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಹೆಚ್.ಡಿ.ಕೆ. ಟಾಂಗ್ ನೀಡಿದ್ದಾರೆ.