ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದು, ತಡರಾತ್ರಿಯೇ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದರು. ಬಾಸಪುರದಲ್ಲಿರುವ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ನಿವಾಸದಲ್ಲಿ ಬೆಳಿಗ್ಗೆ 8ಕ್ಕೆ ತಿಂಡಿಯನ್ನು ಮುಗಿಸಿ, ನಂತರ ಶೃಂಗೇರಿ ಕ್ಷೇತ್ರದ ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ತದನಂತರ ಶೃಂಗೇರಿಯಿಂದ ಮೂಡಿಗೆರೆ ಕ್ಷೇತ್ರಗಳಾದ ಹಿರೇಬೈಲು, ಕಳಸ, ಕೊಟ್ಟಿಗೆಹಾರ ಗ್ರಾಮಗಳಿಗೆ ಭೇಟಿ ನೀಡಿದರು. ಬಳಿಕ ಮರಬಿದ್ದು ಇಬ್ಬರು ಮೃತಪಟ್ಟ