ಚಿಕ್ಕಮಗಳೂರು ತಾಲೂಕಿನ ಬಸಾಪುರದಲ್ಲಿ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ನಾನು ಸತ್ಯ ಹೇಳುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಾವರ್ಕರ್ ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರ ಬಂದವರು. ಅವರ ಫೋಟೋ ಹಿಡಿದುಕೊಂಡು ವೀರ ಸಾವರ್ಕರ್ ಎನ್ನುವವರು ಇವರು ಎಂದು ವ್ಯಂಗ್ಯವಾಡಿದರು. ನಾನು ವಿರೋಧ ಪಕ್ಷದ ನಾಯಕ, ಶ್ಯಾಡೋ ಚೀಫ್ ಮಿನಿಸ್ಟರ್, ನನಗೆ ಭದ್ರತೆ ಕೊಡುವುದು ಸರ್ಕಾರದ ಕರ್ತವ್ಯ. ಪೊಲೀಸರು ಸರಿಯಾದ ಭದ್ರತೆ ಕೊಡಬೇಕು.