ಮಂಗಳೂರು : ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ್ ಅವರು ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಳ್ಳಾಲ ಸಮೀಪದ ನೇತ್ರಾವತಿ ನದಿ ಸೇತುವೆ ಸಮೀಪದಿಂದ ನಿನ್ನೆ ಸಂಜೆ 7 ಗಂಟೆಗೆ ಸಿದ್ದಾರ್ಥ್ ಕಾರು ನಿಲ್ಲಿಸಲು ಹೇಳಿ ಸ್ವಲ್ಪ ದೂರ ನಡೆದುಕೊಂಡು ಹೋದಾಗ ನಾಪತ್ತೆಯಾಗಿದ್ದು, ಬಳಿಕ ಕಾರು ಚಾಲಕ ಫೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಆಪ್ತರಲ್ಲಿ ಆತಂಕ