ಐಟಿ ದಾಳಿ ವಿಚಾರವಾಗಿ ಹಾದಿ ಬೀದೀಲ್ಲಿ ಹೋಗೋರಿಗೆಲ್ಲಾ ಹೇಳಕ್ಕಾಗಲ್ಲ ಎಂದ ಡಿಕೆಶಿ ಹೇಳಿಕೆ ವಿಚಾರವಾಗಿ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ತಾರೆ.ಹಾದಿ ಬೀದಿಯಲ್ಲಿ ಇರೋರಿಗೆ ಉತ್ತರ ಕೊಡೋದು ಬೇಡಪ್ಪ, ಜನರಿಗೆ ಉತ್ತರ ಕೊಡಪ್ಪ.40% ಕಮೀಷನ್ ಅಂತ ಹೇಳಿ ಆರೋಪ ಮಾಡಿದವನ ಮನೆಯಲ್ಲೇ 42 ಕೋಟಿ ಹಣ ಸಿಕ್ಕಿದೆ.40% ಕಮಿಷನ್ ತನಿಖೆ ಮಾಡೋದಕ್ಕೆ ಕಮೀಷನ್ ನೇಮಕ ಮಾಡಿದವರು ಇವರು,ರಾಜಕೀಯ ಮಾಡ್ತಿದ್ದಾರೆ