ಮಾಜಿ ಗೃಹ ಸಚಿವ ನಾಯಿನಿ ನರಸಿಂಹರೆಡ್ಡಿ ನಿಧನ

ಹೈದರಾಬಾದ್| pavithra| Last Modified ಗುರುವಾರ, 22 ಅಕ್ಟೋಬರ್ 2020 (11:27 IST)

ಹೈದರಾಬಾದ್ : ಮಾಜಿ ಗೃಹ ಸಚಿವ, ವಿಧಾನ ಪರಿಷತ್ ಸದಸ್ಯ ನಾಯಿನಿ ನರಸಿಂಹರೆಡ್ಡಿ ಅನಾರೋಗ್ಯದ ಹಿನ್ನಲೆ ಇಂದು ನಿಧನರಾಗಿದ್ದಾರೆ.

 

ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದವರಿಗೆ ಮತ್ತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಹೈದರಾಬಾದ್ ನ ಕಾರ್ಪೋರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ 12.25ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಇವರು ಸ್ವತಂತ್ರ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ನಡೆಸಿದ್ದರು. 3 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ತೆಲಂಗಾಣದ ಮೊದಲ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದರು.

 
ಇದರಲ್ಲಿ ಇನ್ನಷ್ಟು ಓದಿ :