ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯತ್ತ ಬಿ.ಎಸ್. ಯಡಿಯೂರಪ್ಪ ಚಿತ್ತ

ಬೆಂಗಳೂರು, ಬುಧವಾರ, 23 ಮಾರ್ಚ್ 2016 (20:09 IST)

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಬಿಜೆಪಿ ಸ್ಥಾನಕ್ಕೆರಲು ಬಯಸುತ್ತಿದ್ದಾರೆ ಎಂದು ಬುಧವಾರ ಮೂಲಗಳು ತಿಳಿಸಿವೆ. 
ಪ್ರಸಕ್ತವಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಅಧಿಕಾರಾವಧಿ ಮಾರ್ಚ್ ಅಂತ್ಯದಲ್ಲಿ ಕೊನೆಗೊಳ್ಳುವುದರಿಂದ ರಾಜ್ಯಾಧ್ಯಕ್ಷ ಹುದ್ದೆ ಖಾಲಿಯಾಗಲಿದೆ.
 
ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪಕ್ಷದ ಕಾರ್ಯಕರ್ತರು ಮತ್ತೆ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮರಳಿ ಕರೆತರುವ ಪ್ರಯತ್ನ ನಡೆಸಿದ್ದಾರೆ. ಆದರೆ, ಮುಖ್ಯಮಂತ್ರಿ ಆಕಾಂಕ್ಷೆಯಾಗಿರುವ ಇತರೆ ಬಿಜೆಪಿ ನಾಯಕರು ಈ ನಡೆಯನ್ನು ವಿರೋಧಿಸುವ ಸಾಧ್ಯತೆಗಳಿವೆ.
 
2014 ರ ಲೋಕ ಸಭೆ ಚುನಾವಣೆಯಲ್ಲಿ ಮೋದಿ ಸರಕಾರಕ್ಕೆ ಮುನ್ನಡೆಯನ್ನು ನೀಡುವ ಉದ್ದೇಶದಿಂದ, ಬಿ.ಎಸ್.ಯಡಿಯೂರಪ್ಪ ಮತ್ತೆ ಸ್ವಪಕ್ಷಕ್ಕೆ ಮರಳಿದ್ದರು. ಆದರೆ ಅವರ ಮೇಲಿದ್ದ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಿಂದ ಹೊರಗಿಡಲಾಗಿತ್ತು.
 
ಕಳೆದ ಎರಡು ವರ್ಷಗಳಿಂದ ಬಿಜೆಪಿ ಪಕ್ಷದ ನಾಯಕರು, ಪಕ್ಷದ ವಿಷಯ ಮತ್ತು ಚುನಾವಣೆಯ ಅಭ್ಯರ್ಥಿ ಆಯ್ಕೆ ಕುರಿತು ಬಿ.ಎಸ್.ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರೆಸ್ಸೆಸ್ ಮುಖಂಡನ ಹತ್ಯೆಗೈದ ಸಿಪಿಎಂ ನಾಯಕನಿಗೆ ಜಾಮೀನು

ತಿರುವನಂತಪುರಮ್: ಆರೆಸ್ಸೆಸ್ ಕಾರ್ಯಕರ್ತ ಕಥೀರೂರ್ ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ...

news

ಗೌಡ್ರೆ, ನೀವು ನನ್ನನ್ನು ಬೆಳ್ಳಿಯಲ್ಲಿ ತೂಗಲಿಲ್ಲ: ಈಶ್ವರಪ್ಪ

ಬೆಂಗಳೂರು: ನೀರಾವರಿ ಕೆಲಸ ಮಾಡಿಕೊಟ್ಟರೆ ಬೆಳ್ಳಿಯಲ್ಲಿ ತೂಗುತ್ತೇವೆ ಎಂದು ಹೇಳಿದ್ದೀರಿ. ಆದರೆ, ...

news

ಪಂಜಾಬ್, ದೆಹಲಿ ಎನ್‌ಸಿಆರ್‌ನಲ್ಲಿ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ದಳ

ನವದೆಹಲಿ: ಪಂಜಾಬ್, ದೆಹಲಿ ಎನ್‌ಸಿಆರ್‌‌ನಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ದಳದ ...

news

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ: ಕೆ.ಎಸ್.ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ತಡೆಯಲು ಹೋದ ...