ಮಾಜಿ ಸಚಿವ ಡೆಡ್ಲಿ ಕೊರೊನಾಕ್ಕೆ ಬಲಿ

ಯಾದಗಿರಿ| Jagadeesh| Last Modified ಸೋಮವಾರ, 27 ಜುಲೈ 2020 (19:36 IST)
ಡೆಡ್ಲಿ ಕೊರೊನಾಕ್ಕೆ ರಾಜ್ಯದ ಮಾಜಿ ಸಚಿವರೊಬ್ಬರು ಬಲಿಯಾಗಿದ್ದಾರೆ.

ಕಲಬುರ್ಗಿಯ ಇ ಎಸ್ ಐ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಮಾಜಿ ಸಚಿವರು. ಯಾದಗಿರಿ ಜಿಲ್ಲೆಯ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರು ಕೋವಿಡ್ -19 ನಿಂದಾಗಿ ಸಾವನ್ನಪ್ಪಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಕೋವಿಡ್ ಟೆಸ್ಟ್ ಮಾಡಿಸಿದ್ದಾಗ ಪಾಸಿಟಿವ್ ಬಂದಿತ್ತು. ಪಾಸಿಟಿವ್ ಬಂದ ಮೇಲೆ ಕಲಬುರ್ಗಿಯ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಪಾ,ನಿಮೊನಿಯಾ ಹಾಗೂ ಕೆಮ್ಮಿನಿಂದಲೂ ಬಳಲುತ್ತಿದ್ದರು.

ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ ಸುರಪುರ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ವೀರಪ್ಪ ಮೊಯ್ಲಿ ನೇತೃತ್ವದ ಸರ್ಕಾರದಲ್ಲಿ ಎಪಿಎಂಸಿ ಸಚಿವರಾಗಿದ್ದರು.


ಇದರಲ್ಲಿ ಇನ್ನಷ್ಟು ಓದಿ :