ತುಮಕೂರು : ತನ್ನ ಸೋಲಿಗೆ ಎಸ್.ಆರ್. ಶ್ರೀನಿವಾಸ್ ಕಾರಣವೆಂಬ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಹೇಳಿಕೆಗೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಗೆ ಹುಚ್ಚುನಾಯಿ ಕಚ್ಚಿರಬೇಕು. ಅವರು ಚೆನ್ನಾಗಿದ್ದರೆ ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ ಎಂದು ಸ್ವಪಕ್ಷದವರ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರು ಮತಿಭ್ರಮಣೆಯಿಂದ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದ ದೊಡ್ಡವರ ಮಾತುಗಳನ್ನು ನಾನು ಗಮನಿಸುತ್ತಿದ್ದೇನೆ. ವಾಸ್ತವ ಅರಿಯದೆ ಯಾರೋ ಹೇಳಿದ