Widgets Magazine

ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಾಗ್ದಾಳಿ

ಚಿತ್ರದುರ್ಗ| pavithra| Last Modified ಶುಕ್ರವಾರ, 10 ಜನವರಿ 2020 (10:43 IST)
: ಸಚಿವ ಶ್ರೀರಾಮುಲುಗೆ ಸಚಿವ ಸ್ಥಾನವನ್ನು ನಿಭಾಯಿಸಲು ಬರಲ್ಲ.ಕೇವಲ ಬಿಲ್ಡಪ್ ಕೊಡುವುದು ಮಾತ್ರ ರಾಮುಲುಗೆ ಬರುತ್ತೆ ಎಂದು ಸಚಿವ ಶ್ರೀರಾಮುಲು ವಿರುದ್ಧ ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ನೇರಲಗುಂಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಳ್ಳಾರಿಯಲ್ಲಿ ಬಿ.ಶ್ರೀರಾಮುಲು ವರ್ಚಸ್ಸು ಬಿದ್ದುಹೋಗಿದೆ. ಹೀಗಾಗಿ ಮೊಳಕಾಲ್ಮೂರಿಗೆ ಹೊಟ್ಟೆಪಾಡಿಗಾಗಿ ಬಂದಿದ್ದಾನೆ. ಶ್ರೀರಾಮುಲು 20 ಆಪ್ತ ಸಹಾಯಕರನ್ನು ಇಟ್ಟುಕೊಂಡಿದ್ದಾರೆ. 20 ಆಪ್ತ ಸಹಾಯಕರು ವಸೂಲಿ ಮಾಡಲು ಇದ್ದಾರೆ. ಕ್ಷೇತ್ರದ ಜನರಿಗೆ ಶ್ರೀರಾಮುಲು ಸಿಗುವುದು ಕಷ್ಟವಾಗಿದೆ’ ಎಂದು ಕಿಡಿಕಾರಿದ್ದಾರೆ.


‘ನಾನು ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆಗೆ ಬರುತ್ತಾನೆ.  ಶ್ರೀರಾಮುಲು ಬುಡಬುಡಿಕೆ ಮಾತುಗಳಿಗೆ ಯಾರು ಹೆದರಲ್ಲ. ಸಚಿವ ಶ್ರೀರಾಮುಲು ನಾಯಕರ ನಾಯಕ ಆಗಿದ್ದರೆ  ಹುಣಸೂರಿನಲ್ಲಿ ಹೆಚ್.ವಿಶ್ವನಾಥ್ ಗೆಲ್ಲಿಸಿ ತೋರಿಸಬೇಕಿತ್ತು ಎಂದು ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :