ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಬೇಕಿದ್ದ ಮತಗಟ್ಟೆಯ ಯಂತ್ರದಲ್ಲಿ ದೋಷ ಕಂಡುಬಂದಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತದಾನ ಮಾಡಲಿದ್ದು , ಬೆಳಿಗ್ಗೆ 8.30ರ ವೇಳೆ ಮತ ಹಾಕಲು ದೇವೇಗೌಡರ ಕುಟುಂಬ ಆಗಮಿಸಲಿದೆ. ಆದರೆ ಇದೀಗ ಇವಿಎಂ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪದೇ ಪದೇ ವೊಟಿಂಗ್ ಮೆಷಿನ್ ಕೈಕೊಡುತ್ತಿರುವ ಕಾರಣ ಅದನ್ನು ಸರಿಪಡಿಸಲು ಚುನಾವಣಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ತಾಜಾ ಸುದ್ದಿಗಳನ್ನು