ಮೇಕೆದಾಟು ಅಣೆಕಟ್ಟು ನಿರ್ಮಾಣ ಕೈಗೊಂಡರೆ ಉಪವಾಸ ಸತ್ಯಾಗ್ರಹ ಎಂದಿರುವ ಅಣ್ಣಾಮಲೈ ಹೇಳಿಕೆಯನ್ನು ಖಂಡಿಸಿ ರೈತ ಮುಖಂಡರು ಆಕ್ರೋಶವ್ಯಕ್ತಪಡಿಸಿದ್ದು, ಅಣ್ಣಾಮಲೈ ಕರ್ನಾಟಕದಲ್ಲಿ ಐಪಿಎಸ್ ಆಗಿದ್ದವರು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ. ಮೇಕೆದಾಟು ಯೋಜನೆ ವಿರೋಧಿಸಿ ಕರ್ನಾಟಕದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದಿದ್ದಾರೆ. ಅಣ್ಣಾಮಲೈ ಅವರ ಈ ನಿರ್ಧಾರ ಸರಿಯಲ್ಲ, ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ. ಮೇಕೆದಾಟು ಅಣೆಕಟ್ಟಿನಿಂದ ಎರಡೂ ರಾಜ್ಯಕ್ಕೆ ಉಪಯೋಗ ಇದೆ. ಅಣ್ಣಾಮಲೈ ಅವರ ಹೇಳಿಕೆಯನ್ನ ಹಿಂಪಡೆಯಲಿ