ನೀವು ಚಿಕನ್, ಮಟನ್ ಪ್ರಿಯರಾಗಿದ್ದರೆ ಹುಷಾರ್. ಏಕೆಂದರೆ ನಾಲ್ಕೈದು ದಿನಗಳ ಹಿಂದೆ ಕತ್ತರಿಸಿ ಫ್ರಿಡ್ಜಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಕೊಳೆತ ಮಾಂಸವನ್ನು ಮಾರಾಟ ಮಾಡುವವರು ಇದ್ದಾರೆ. ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕಳಪೆ ಗುಣಮಟ್ಟದ ಮಾಂಸ ಮಾರಾಟ ಮಾಂಸದಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹೆಚ್.ಕೆ.ಲಿಖಿತ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮಾಂಸದಂಗಡಿಗಳಿಗೆ ವಾರದಲ್ಲಿ ಮೂರು ದಿನಗಳ ಕಾಲ ತೆರೆದು ಮಾಂಸದ ಮಾರಾಟಕ್ಕೆ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಮಾಸ್ಕ್