ಬೆಂಗಳೂರಿನ ಸಂಪಿಗೆಹಳ್ಳಿಯ ಯುವಕ ಸಲ್ಮಾನ್ ಕೊಲೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಓರ್ವ ಯುವಕ, ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನ ಬಂಧಿಸಲಾಗಿದೆ. ಮೀಸೆ ಚಿಗುರದ ಯುವಕರ ನಡುವಿನ ದ್ವೇಷಕ್ಕೆ ಕೊಲೆ ನಡೆದಿದ್ದು, ಡಿಸೆಂಬರ್ 20ರ ರಾತ್ರಿ ಸಲ್ಮಾನ್ನನ್ನ ಆರೋಪಿಗಳು ಹತ್ಯೆಗೈದಿದ್ದರು. ತಮ್ಮ ತಮ್ಮ ನಡುವಿನ ಜಗಳದಲ್ಲಿ ದೊಡ್ಡವರು ಚಿಕ್ಕವರೆಂಬ ಕಿರಿಕ್ ಶುರುವಾಗಿದೆ.. ಇದೇ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಲ್ಮಾನ್ ಹತ್ಯೆ ಆಗಿದೆ. ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ