ಕೊರೋನಾ ಸೋಂಕಿನಿಂದ ಗುಣಮುಖರಾದವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಕಲಬುರಗಿ ನಗರದ ನಾಲ್ಕು ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.ಕಲಬುರಗಿ ನಗರದ ದರ್ಗಾ ಪ್ರದೇಶದ 10 ವರ್ಷದ ಬಾಲಕಿ (ರೋಗಿ ಸಂಖ್ಯೆ-254), ಖಾದ್ರಿ ಚೌಕ್ ಪ್ರದೇಶದ 32 ವರ್ಷದ ಯುವಕ(ರೋಗಿ ಸಂಖ್ಯೆ-314) ಹಾಗೂ ಮೋಮಿನಪುರ ಪ್ರದೇಶದ 5 ವರ್ಷದ ಗಂಡು ಮಗು(ರೋಗಿ ಸಂಖ್ಯೆ-315) ಮತ್ತು 13 ವರ್ಷದ ಬಾಲಕಿ(ರೋಗಿ ಸಂಖ್ಯೆ-392) ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರಾಗಿದ್ದಾರೆ.ಇದರಿಂದ ಕಲಬುರಗಿ ಜಿಲ್ಲೆಯಲ್ಲಿ