ಬೆಂಗಳೂರು : ಫ್ರಾನ್ಸ್ ಸರ್ಕಾರವು ರಾಜ್ಯದಲ್ಲಿ ಇಂಡೋ-ಫ್ರೆಂಚ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಉತ್ಸುಕವಾಗಿದ್ದು, ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ ಪದವಿ ನೀಡಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಭಾರತದಲ್ಲಿ ಫ್ರಾನ್ಸ್ ದೇಶದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ಥಿಯರಿ ಬರ್ತೆಲೋಟ್ ಅವರು ಬುಧವಾರ ತಮ್ಮನ್ನು ಭೇಟಿಯಾದಾಗ ಈ ಸಂಬಂಧ ಅವರು ಈ ಕುರಿತು ಮಾತುಕತೆ ನಡೆಸಿದರು. ಈ