ಸರಕಾರಿ ನೌಕರಿ ಕೊಡಿಸೋದಾಗಿ ವ್ಯಕ್ತಿಯೊಬ್ಬರಿಂದ ಲಕ್ಷ ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಭೀಮಾಶಂಕರ ಗೊಜ್ಜಿ ಎಂಬುವರೇ ನೌಕರಿ ಆಸೆಗೆ ಹಣ ಕಳೆದುಕೊಂಡಿದ್ದಾರೆ.ಧಾರವಾಡ ಸಪ್ತಾಪೂರದ ಬಾರಾಕೊಟ್ರಿ ನಿವಾಸಿ ಭೀಮಪ್ಪ ಪೂಜಾರ್ ಕೆಲಸ ಕೊಡಿಸೋದಾಗಿ ಭೀಮಾಶಂಕರ್ ರಿಂದ ಹಂತ, ಹಂತವಾಗಿ 4 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಲಾಗಿದೆ.ಮುಖ್ಯಮಂತ್ರಿ ಹಾಗೂ ಸಚಿವರು ತಮಗೆ ಆಪ್ತರಾಗಿದ್ದಾರೆ. ಹೀಗಾಗಿ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಕೆಲಸ