ಕೊಡಗು ನೆರೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ರಾಜ್ಯದ ವಿವಿಧೆಡೆ ದಾನಿಗಳು ಮುಂದಾಗಿದ್ದಾರೆ. ಏತನ್ಮಧ್ಯೆ ಸಂತ್ರಸ್ತರ ಕುಟಂಬಗಳ ಮಕ್ಕಳಿಗೆ ಮಾಜಿ ಸಚಿವರೊಬ್ಬರು ಉಚಿತ ಶಿಕ್ಷಣ ನೀಡಲು ಮುಂದಾಗಿದ್ದಾರೆ.ಮಾಜಿ ಸಚಿವ ಹಾಗೂ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚೆನ್ನಿಗಪ್ಪಾ, ಕೊಡಗು ನೆರೆ ಸಂತ್ರಸ್ತ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ತಮ್ಮ ಒಡೆತನದ ವಿದ್ಯಾಸಂಸ್ಥೆಯಲ್ಲಿ ಸಂತ್ರಸ್ತರ ಕುಟುಂಬದ 100 ಮಕ್ಕಳಿಗೆ ಉಚಿತ ವಸತಿ ಶಿಕ್ಷಣ ನೀಡುವುದಾಗಿ ಘೋಷಿಸಿದ್ದಾರೆ. ನೆಲಮಂಗಲ ಬಳಿ ಇರುವ ಶಿವಕುಮಾರ ಮಹಾಸ್ವಾಮೀಜಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್