ಕೊರೊನಾದಿಂದಾಗಿ 144 ಸೆಕ್ಷನ್ ಜಾರಿಯಲ್ಲಿದ್ದರೆ, ಈ ಜಿಲ್ಲೆಯ ಜನರು ಮಾತ್ರ ಮನೆಯಿಂದ ಹೊರಬರದಂತೆ ಇದ್ದಾರೆ. ಜಿಲ್ಲಾಡಳಿತದ ವಿನೂತನ ಕ್ರಮ ಇಲ್ಲಿ ಸಕ್ಸಸ್ ಆಗಿದೆ. ರೈತರಿಂದ ನೆರವಾಗಿ ಜನರ ಮನೆ ಬಾಗಿಲಿಗೆ ತಾಜಾ ತರಕಾರಿ ತಲುಪಿಸುವುರೊಂದಿಗೆ ಜನರು ಮನೆಯಿಂದ ಹೊರಗೆ ಬರದಂತೆ ತಡೆದಿದೆ ಕೊಪ್ಪಳ ಜಿಲ್ಲಾಡಳಿತ.ಕೋವಿಡ್ 19 ಸೋಂಕು ಹರಡಂತೆ ತಡೆದು ಜನರ ಮೆಚ್ಚಿಗೆ ಪಾತ್ರವಾಗಿದೆ. ಜನರು ಮನೆಯಿಂದ ಹೊರಗೆ ಬರದಂತೆ ಹೇರಿರುವ ನಿರ್ಭಂದಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಜನರು ಕೈ ಜೋಡಿಸಿದ್ದಾರೆ.