ಬೆಂಗಳೂರು : ಲಾಕ್ ಡೌನ್ ನಡುವೆಯೂ ರಾಜ್ಯ ಸರ್ಕಾರ ಮದ್ಯದ ಬೆಲೆ ಹೆಚ್ಚಿಸುವುದರ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದೆ. ಇಂದಿನಿಂದ ಮದ್ಯದ ಬೆಲೆ ದುಬಾರಿಯಾಗಲಿದ್ದು, ಮಂಗಳವಾರ ಮಧ್ಯರಾತ್ರಿಯಿಂದಲೇ ಹೊಸ ರೇಟು ಜಾರಿಯಾಗಿದೆ. ಸಿಎಂ ಬಿಎಸ್ ವೈ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಎಲ್ಲ ಸ್ಲ್ಯಾಬ್ ಗಳ ಮೇಲೆ ಶೇ.6ರಷ್ಟು ಹೆಚ್ಚಳ ಆಗಲಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿದ್ದು, ಗಜೆಟ್ ಆದೇಶ ಮಾತ್ರ ಬಾಕಿ ಇದೆ