ಸಿಕ್ಕಾಪಟ್ಟೆ ಚಳಿ. ಕಾಫಿ , ಟೀ ಕುಡ್ದು ಕುಡ್ದು ಸಾಕಾಗಿದೆ ಅಂಥ ಅನಿಸಿದ್ರೆ ಒಮ್ಮೆ ಬಸವನಗುಡಿ ನ್ಯಾಷನಲ್ ಗ್ರೌಂಡ್ ಗೆ ಹೋಗಿ ಬನ್ನಿ .ಯಾಕೆಂದ್ರೆ ಇವತ್ತಿಂದ ಜನವರಿ 9ರವೆರೆಗೆ ಅಲ್ಲಿ ಬಗೆ ಬಗೆಯ ಅವರೆಬೇಳೆ ತಿಂಡಿಗಳು ನಿಮ್ಮ ನಾಲಿಗೆಗೆ ರುಚಿ ನೀಡೋಕೆ ಸಿದ್ಧವಾಗಿವೆ. ವಾಸವಿ ಕಾಂಡಿಮೆಂಟ್ಸ್ನಿಂದ ಪ್ರತಿವರ್ಷದಂತೆ ಈ ವರ್ಷ ಕೂಡ ಅವರೆಬೇಳೆ ಮೇಳ ಆಯೋಜಿಸಿದ್ದು, ಅವರೆಬೇಳೆ ತಿಂಡಿಗಳು ಘಮಘಮಿಸುತ್ತಿವೆ. ಇವತ್ತಿನಿಂದ ನಡೆಯುತ್ತಿರೋ ಈ ಮೇಳಕ್ಕೆ ಸಾದಾಸೀದಾ ಗುಣದಿಂದಲೇ ಸದ್ದುಮಾಡಿರೋ