ದೇಶಾದ್ಯಂತ ಉಗ್ರರ ಹೀನ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ಉಗ್ರರ ನಡೆ ಸಮರ್ಥಿಸಿಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗಿ ಪೋಲಿಸರ ಅಥಿತಿಗಳಾಗುತ್ತಿರುವದು ಕಂಡು ಬರುತ್ತಿದೆ. ಈ ಎಲ್ಲದರ ನಡುವೆ ಹುತಾತ್ಮ ಯೋಧರಿಗೆ ಪುಟ್ಟ ಮಕ್ಕಳಿಂದ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿ ಕಂಡು ಬಂದಿದೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಬುರುಡ ಗಲ್ಲಿಯ 1ನೇ ತರಗತಿಯಿಂದ 4 ನೇ ತರಗತಿಯ ಪುಟಾಣಿ ವಿದ್ಯಾರ್ಥಿಗಳು ಮೇನದ ಬತ್ತಿ ಹಿಡಿದು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.