ನಾಳೆಯಿಂದ ಸರ್ಕಾರಿ ಶಾಲೆಗೆ ಡಿಡಿ ಚಂದನದಲ್ಲಿ ಪಾಠ ಶುರು

ಬೆಂಗಳೂರು| pavithra| Last Updated: ಭಾನುವಾರ, 19 ಜುಲೈ 2020 (10:23 IST)
ಬೆಂಗಳೂರು : ಕೊರೊನಾ ಭೀತಿಯಿಂದ ಈ ವರ್ಷ ಶಾಲೆ ಆರಂಭವಾಗೋದು ಡೌಟ್. ಆದಕಾರಣ ಈ ವರ್ಷವಿಡಿ ಆನ್ ಲೈನ್ ಕ್ಲಾಸೇ ಗತಿ? ಎನ್ನಲಾಗಿದೆ.

ಈಗಾಗಲೇ ಖಾಸಗಿ ಶಾಲೆಗಳಿಗೆ ಆನ್ ಲೈನ್ ತರಗತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ನಾಳೆಯಿಂದ ಸರ್ಕಾರಿ ಶಾಲೆಗೆ ಡಿಡಿ ಚಂದನದಲ್ಲಿ ಮಾಡಲು ನಿರ್ಧರಿಸಲಾಗಿದೆ. ವಾಹಿನಿಯಲ್ಲಿ  8ನೇ ತರಗತಿ ಮತ್ತು 10ನೇ ತರಗತಿಗೆ ಪಾಠ ಶುರು ಆಗಲಿದೆ ಎನ್ನಲಾಗಿದೆ.

10 ದಿನಗಳ ತರಗತಿ ವೇಳಾಪಟ್ಟಿ ಪ್ರಕಟ ಮಾಡಲಾಗುವುದು. ಪ್ರತಿ ಅರ್ಧ ಗಂಟೆಗೆ 1 ವಿಷಯ ಬೋಧನೆ ಮಾಡಲಾಗುವುದು.  4 ಗಂಟೆಯಲ್ಲಿ 8 ವಿಷಯಗಳಿಗೆ ಪಾಠ ನಡೆಯುತ್ತದೆ. ಸೇತುಬಂಧ ಮೂಲಕ ಡಿಡಿಯಲ್ಲಿ ಪಾಠ ಮಾಡುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :