ಅತೃಪ್ತರ ಶಾಸಕರಿಗೆ ಫುಲ್ ಟೆನ್ಶನ್: ಸುಪ್ರೀಂ ಮೊರೆ ಹೋದ ಸ್ಪೀಕರ್

ಬೆಂಗಳೂರು, ಗುರುವಾರ, 11 ಜುಲೈ 2019 (19:02 IST)

ವಿಧಾನಸಭಾಧ್ಯಕ್ಷನಾದ ನನಗೆ ಆದೇಶ ನೀಡಲು ನ್ಯಾಯಾಲಯಗಳಿಗೆ ಆದೇಶವಿಲ್ಲ. ಕಾನೂನು ಹಾಗೂ ನಿಯಮಗಳ ಪ್ರಕಾರವೇ ನಿರ್ಧಾರವನ್ನು ಕೈಗೊಳ್ಳಬೇಕಿದೆ. ಹೀಗಂತ ಸುಪ್ರೀಂಕೋರ್ಟ್ ಮೆಟ್ಟಿಲನ್ನೇರಿದ್ದಾರೆ ಸ್ಪೀಕರ್.

ಅತೃಪ್ತ ಶಾಸಕರು ನೀಡಿರೋ ರಾಜೀನಾಮೆ ಕುರಿತು ಸಂಜೆ 6 ಗಂಟೆಯ ಒಳಗೆ ತೀರ್ಮಾನ ಮಾಡೋಕೆ ಸಾಧ್ಯವೇ ಇಲ್ಲ. ಹೀಗಂತ ಸ್ಪೀಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆ ಮೂಲಕ ಅತೃಪ್ತ ಶಾಸಕರ ಎದೆ ಮತ್ತಷ್ಟು ಡವಡವ ಎನ್ನುವಂತೆ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರದ ಬಗ್ಗೆ ಇಂದು ಸಂಜೆ 6 ಗಂಟೆಯ ಒಳಗಡೆ ನಿರ್ಧಾರ ಕೈಗೊಂಡು ಶುಕ್ರವಾರ ತಿಳಿಸಬೇಕೆಂದು ಸ್ಪೀಕರ್ ಗೆ  ಆದೇಶವನ್ನು ನೀಡಿತ್ತು.

ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿರುವ ಸ್ಪೀಕರ್, ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆ ಶುಕ್ರವಾರ ನಡೆಸುವ ಇಂಗಿತ ವ್ಯಕ್ತಪಡಿಸಿದೆ.

 

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಗೆ ಸವಾಲ್ - ವಿಶ್ವಾಸಮತ ಎದುರಿಸಲು ಸಿದ್ಧವೆಂದ ಮೈತ್ರಿಪಕ್ಷ

ಮೈತ್ರಿ ಪಕ್ಷಗಳ ಶಾಸಕರ ರಾಜೀನಾಮೆ ಪ್ರಹಸನ ಮುಗಿದಿಲ್ಲ. ಈ ನಡುವೆ ಬಿಜೆಪಿಗೆ ವಿಶ್ವಾಸವಿದ್ದರೆ ಮೈತ್ರಿ ...

news

ಬಿಜೆಪಿ ಲಾಬಿ, ಅಧಿಕಾರ ನನಗೆ ಬೇಕಿಲ್ಲ ಎಂದ ಕೈ ಶಾಸಕ

ಮೈತ್ರಿ ಸರಕಾರದ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ...

news

ರೆಬಲ್ ಶಾಸಕರ ಹೈಡ್ರಾಮಾ ನಡುವೆ ಕಂಗಾಲಾದ ರೈತರು

ಮೈತ್ರಿ ಸರಕಾರದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಿ ಹೈಡ್ರಾಮಾಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ...

news

ಹೆಣ್ಣು ಮಗುವಿನೊಂದಿಗೆ ನದಿ ದಾಟಿ ಕಾಡಿಗೆ ಹೋಗಿದ್ಯಾಕೆ?

ಮುಸುಕುಧಾರಿಯೊಬ್ಬ ಹೆಣ್ಣುಮಗುವನ್ನು ಹೊತ್ತುಕೊಂಡು ನದಿ ದಾಟಿ ಕಾಡಿಗೆ ಹೋಗಿರುವ ಘಟನೆ ನಡೆದಿದೆ.