ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಪಂಚಭೂತಗಳಲ್ಲಿ ಲೀನವಾದ್ರು. ಶ್ರೀಗಳ ಅಂತ್ಯಸಂಸ್ಕಾರ ಧಾರ್ಮಿಕ ವಿಧಿ ವಿಧಾನದೊಂದಿಗೆ ಹಿರಿಯಡ್ಕದಲ್ಲಿರುವ ಶಿರೂರಿನ ಮೂಲ ಮಠದಲ್ಲಿ ನೆರವೇರಿತು.ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಿರೂರು ಶ್ರೀಗಳ ಪಾರ್ಥಿವ ಶರೀರವನ್ನು ಹತ್ತಿಯ ಬುಟ್ಟಿಯಲ್ಲಿ ಇರಿಸಲಾಯಿತು. ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಬುಟ್ಟಿಯಲ್ಲಿ ಪಾರ್ಥೀವ ಶರೀರವಿರಿಸಿ ಮಠದ ಭಕ್ತರು ಶವಾಗಾರದಿಂದ ಹೊತ್ತುಕೊಂಡು ಬಂದರು. ಅಲ್ಲಿಂದ ಉಡುಪಿ ಶ್ರೀಕೃಷ್ಣ ಮಠದವರೆಗೂ ಪುಷ್ಪಾಲಂಕೃತ ಜೀಪಿನಲ್ಲಿ