ಮಂಡ್ಯ : ಪರಿಷತ್ ಚುನಾವಣೆಗೆ ಸಾಮಾನ್ಯ ವ್ಯಕ್ತಿಗಳು ಸ್ಪರ್ಧಿಸುವಂತಿಲ್ಲ. ನಿಯಮದ ಪ್ರಕಾರ ಸ್ಪರ್ಧೆಗೆ ಅರ್ಹರಿದ್ದರೂ ಗೆಲ್ಲುವ ಉದ್ದೇಶವಿದ್ದವರು ಹಣವಂತರಾಗಿಬೇಕು ಇಲ್ಲವೇ ಗುಣವಂತರೆಂದು ಪಕ್ಷ ಗುರುತಿಸಿದವರಾಗಿದ್ದರೆ ಚುನಾವಣೆಯಲ್ಲಿ ಪೈಪೋಟಿ ನೀಡಬಹುದು. ಪಕ್ಷದ ಚಿಹ್ನೆ ಇಲ್ಲದೇ ಆಯ್ಕೆಯಾದ ಗ್ರಾಮಪಂಚಾಯಿತಿ ಸದಸ್ಯರು ಯಾರಿಗೆ ಬೇಕಾದರೂ ಮತದಾನ ಮಾಡಲು ಸ್ವತಂತ್ರರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಇರುವ ಗ್ರಾ.ಪಂ. ಸದಸ್ಯರಿಗೆ ಡಿಮ್ಯಾಂಡ್ ಜೋರಾಗಿದೆ. ಚುನಾವಣಾ ವೆಚ್ಚದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದೆ. ಎಲ್ಲರೂ ಗ್ರಾ.ಪಂ ಸದಸ್ಯರಾಗಿ ಯಾವುದಾದರೊಂದು ಪಕ್ಷದ