ಬೆಂಗಳೂರು: ಗೃಹಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತು, ಸಂಪೂರ್ಣವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕೆಲಸದ ಬಗ್ಗೆ ಗಮನಹರಿಸುವಂತೆ ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಗೃಹಸಚಿವ ಜಿ. ಪರಮೇಶ್ವರ್ ಸರ್ಕಾರಿ ಕಚೇರಿಗೆ ಗುಡ್ ಬೈ ಹೇಳಿದ್ದಾರೆ. ವಿಧಾನಸೌಧದಿಂದ ಕೆಪಿಸಿಸಿ ಕಚೇರಿಗೆ ತೆರಳಲು ಸರ್ಕಾರಿ ಕಾರು ಬಿಟ್ಟು, ಖಾಸಗಿ ಕಾರನ್ನೇ ಪರಮೇಶ್ವರ್ ಬಳಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಘೋಷಿಸಿರುವ ಹೈಕಮಾಂಡ್ ನಿರ್ಧಾರದ ಬಗ್ಗೆ ನೇರವಾಗಿ ಉತ್ತರಿಸದೇ ಮುಂದೆ