ನವದೆಹಲಿಯಲ್ಲಿ ಜಿ20 ಶೃಂಗಸಭೆ ಹಿನ್ನೆಲೆ ದೆಹಲಿ ಸುತ್ತಲೂ ನಿಷೇದಾಜ್ಞೆ ಜಾರಿಗೆ ಸಿದ್ದತೆ ಮಾಡಲಾಗಿದೆ.ಶಾಲೆ- ಕಾಲೇಜುಗಳಗಳು, ಕಚೇರಿಗಳು, ಅಂಗಡಿ ಮುಂಗಟ್ಟು, ಮಾಲ್ಗಳು ಸಂಪೂರ್ಣ ಬಂದ್ ಮಾಡಲಾಗಿದೆ.ರಸ್ತೆ ಸಂಚಾರದಲ್ಲಿ ನಿರ್ಬಂಧಗಳನ್ನು ಸಹ ವಿಧಿಸಲು ನಿರ್ಧಾರ ಮಾಡಲಾಗಿದ್ದು, ಸೆಪ್ಟೆಂಬರ್ 8ರಿಂದ 10 ರವರೆಗೆ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ಸೆಪ್ಟೆಂಬರ್ 7ರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೆ ಬರಲಿದೆ. ನವದೆಹಲಿಗೆ VVIPಗಳನ್ನು ಹೊರತುಪಡಿಸಿ ಬೇರೆ ಯಾರು ಪ್ರವೇಶಿಸುವಂತಿಲ್ಲ. ಜಿ20 ಪಾಸ್ ಹೊಂದಿದವರಿಗೆ ಮಾತ್ರ ಒಡಾಟಕ್ಕೆ ಅವಕಾಶ ಸಿಗಲಿದೆ.