ಸರ್ವಿಸ್ ರೈಫಲ್ ನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಗದಗ ಮೂಲದ ಬಿಎಸ್ ಎಫ್ ಯೋಧ ಮೃತಪಟ್ಟ ಘಟನೆ ಛತ್ತೀಸ್ ಗಢದಲ್ಲಿ ಸಂಭವಿಸಿದೆ. ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದ ಸೈನಿಕ ಲಕ್ಷ್ಮಣ ಗೌರಣ್ಣವರ (35) ಮೃತಪಟ್ಟಿದ್ದಾರೆ. ಸೋಮವಾರ ಸಂಜೆ ನಕ್ಸಲ್ ಗುಂಡಿಗೆ ಲಕ್ಷ್ಮಣ ಗೌರಣ್ಣವರ ಬಲಿಯಾಗಿದ್ದಾರೆ ಎಂಬ ಬಗ್ಗೆ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಡಳಿತಕ್ಕೆ ಬಿಎಸ್ ಎಫ್ ಅಧಿಕೃತ ಮಾಹಿತಿ ನೀಡಿದೆ. ಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ ಆಗಮಿಸುತ್ತಿದ್ದು,