ಮಾರಣಾಂತಿಕ ಮಹಾಮಾರಿ ಶಂಕಿತ ನೀಫಾ ವೈರಸ್ ಗದಗ ಜಿಲ್ಲೆಗೂ ಕಾಲಿಟ್ಟಿದೆ ಎನ್ನಲಾಗುತ್ತಿದೆ. ಗದಗ ಜಿಲ್ಲೆ ರೋಣ ತಾಲೂಕಿನ ವ್ಯಕ್ತಿಯೋರ್ವನಿಗೆ ನಿಫಾ ವೈರಸ್ ಇದೆ ಎಂದು ಶಂಕಿಸಲಾಗಿದೆ. ಸೋಂಕಿತ ವ್ಯಕ್ತಿಗೆ ಗದಗ ಜಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ವಿಶೇಷ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯಕ್ತಿ ಕೆಲ ತಿಂಗಳ ಕಾಲ ಕೇರಳದ ಕ್ಯಾಲಿಕಟ್ ಸಮೀಪದಲ್ಲಿ ಕೆಲಸದಲ್ಲಿದ್ದರು. ಇತ್ತೀಚೆಗೆ ಗದಗ ಜಿಲ್ಲೆಯ ತವರೂರಿಗೆ ಮರಳಿದಾಗ ಕಳೆದ ಒಂದೆರಡು ವಾರಗಳಿಂದ ಜ್ವರ, ತಲೆನೋವು, ವಾಂತಿ,