ಗೋವಾ : ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ ಗೋವಾದಲ್ಲಿ ಗದಗ , ಕೊಪ್ಪಳ ಜಿಲ್ಲೆ ಕಾರ್ಮಿಕರು ಪರದಾಡುತ್ತಿದ್ದಾರೆ. ಕೂಲಿಗಾಗಿ ಗೋವಾಗೆ ಹೋಗಿದ್ದ ರಾಜ್ಯದ ಕಾರ್ಮಿಕರು ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದಕಾರಣ ತಮ್ಮನ್ನು ಕರ್ನಾಟಕಕ್ಕೆ ಕರೆಸಿಕೊಳ್ಳುವಂತೆ ಕಾರ್ಮಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.