ಬಿಸಿಲು ನಗರಿಯಲ್ಲಿ ಗಣೇಶ ಹಬ್ಬದ ಸಂಭ್ರಮ

ಕಲಬುರಗಿ| Jagadeesh| Last Modified ಗುರುವಾರ, 13 ಸೆಪ್ಟಂಬರ್ 2018 (18:59 IST)
ದೇಶದಲ್ಲೆಡೆ ಗೌರಿ ಗಣೇಶ್ ಹಬ್ಬದ ಮನೆ ಮಾಡಿದ್ದು ಕಲಬುರ್ಗಿಯಲ್ಲಿ
ಕೂಡ ಜನ ಹಬ್ಬವನ್ನ ಸಂಭ್ರಮದಿಂದ ಆಚರಣೆ ಮಾಡುತಿದ್ದಾರೆ. ನಿನ್ನೆ ರಾತ್ರಿಯಿಂದಲೇ

ಬೆಳಿಗ್ಗೆಯು ಕೂಡ ಜನ ವಿನಾಯಕನನ್ನ ಮನೆಗೆ ತೆಗೆದು ಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಗಣೇಶನಿಗೆ ಇಷ್ಟವಾದ ಗರಿಕಿ, ಪತ್ತರಿ, ಹಣ್ಣು ಹಂಪಲ, ಸೀತಾ, ಪೇರಲ ಹಣ್ಣುಗಳ ಮಾರಾಟ ಕೂಡ ಜೋರಾಗಿತ್ತು.

ಈ ಬಾರಿ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಹಬ್ಬಕ್ಕೆ ಕೊಂಚಮಟ್ಟದ ಹಿನ್ನಡೆಯನ್ನ ಮಾಡಿದ್ರೂ, ಹಬ್ಬದ ಕಳೆ ಮಾತ್ರ ಕಳೆಗುಂದಿರಲಿಲ್ಲ. ಜನ ಭಾಳ ಹುಮ್ಮಸ್ಸಿನಿಂದ ಸಡಗರದಲ್ಲಿ ತೊಡಗಿದ್ದು ಕಂಡುಬಂತು.


ಇದರಲ್ಲಿ ಇನ್ನಷ್ಟು ಓದಿ :