ಬೆಂಗಳೂರು: ಈ ಬಾರಿ ಕೊರೋನಾ ನಡುವೆಯೂ ಗಣೇಶ ಹಬ್ಬ ಆಚರಿಸಲು ಜನ ಸಜ್ಜಾಗುತ್ತಿದ್ದಾರೆ. ಹಾಗಿದ್ದರೂ ಲಾಕ್ ಡೌನ್ ಸಂಪೂರ್ಣ ತೆರವಾಗದ ಹಿನ್ನಲೆಯಲ್ಲಿ ಗಣೇಶೋತ್ಸವ ಆಚರಿಸಲು ಒಪ್ಪಿಗೆ ಸಿಗಬಹುದೇ ಎಂದು ಅನುಮಾನಗಳು ಜನರಲ್ಲಿವೆ.ಪ್ರತೀ ಬಾರಿಯಂತೆ ಈ ಬಾರಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗದು. ಹಾಗಿದ್ದರೂ ಸರ್ಕಾರ ನೀಡಿರುವ ಕೆಲವು ಸಲಹೆ ಸೂಚನೆ ಪಾಲಿಸಿದರೆ ನಿಮ್ಮ ಗಲ್ಲಿಯಲ್ಲಿ ಗಣೇಶೋತ್ಸವ ಆಚರಿಸುವುದಕ್ಕೆ ಅಡ್ಡಿಯಿರದು. ಈ ಬಾರಿ ಹಬ್ಬಕ್ಕೆ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಕೂರಿಸಲು