ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.ಇಬ್ಬರು ಮಹಿಳೆಯರು ಸೇರಿ ಹನ್ನೊಂದು ಜನ ಖತರ್ನಾಕ್ ಗ್ಯಾಂಗ್ ಬಂಧನವಾಗಿದೆ. ಅಮಾಯಕರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು.ಅಸಲಿ ನೋಟುಗಳನ್ನು ತೆಗೆದುಕೊಂಡು ನಕಲಿ ನೋಟುಗಳನ್ನು ನೀಡಿ ಪರಾರಿಯಾಗುತ್ತಿದ್ದ ಗ್ಯಾಂಗ್ ಇದಾಗಿದೆ. ಲಕ್ಷಾಂತರ ರೂಪಾಯಿ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ವಿವಿಧ ಕಡೆ ವಂಚನೆ ಮಾಡಿದ್ದಾರೆ.ಆಂಧ್ರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಅನಂತಪುರ, ಕರ್ನಾಟಕದ ಮುರಗಮಲ್ಲದಲ್ಲಿ ಖದೀಮರ ಕೈಚಳಕ ನಡೆದಿದೆ.