ಬಿಹಾರ : ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ ಬಿಹಾರದ ಚಪ್ರಾ ಜಿಲ್ಲೆಯಲ್ಲಿ ನಡೆದಿದೆ. ಅ.18 ರಂದು ಬಾಲಕಿ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದಾಗ ದಾರಿಯ ಮಧ್ಯೆ ಎದುರಾದ ಇಬ್ಬರು, ಮಾರಕಾಸ್ತ್ರಗಳನ್ನು ಹಿಡಿದು, ಆಕೆಯನ್ನು ಹೆದರಿಸಿ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಯಾರಿಗೂ ತಿಳಿಸದ ಬಾಲಕಿ ಶನಿವಾರದಂದು ತನ್ನ ಪೋಷಕರ ಬಳಿ ಹೇಳಿದ್ದಾಳೆ.