ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮೀತಿ ಮೀರಿದೆ. ಪುಲಕೇಶಿ ನಗರ ಠಾಣೆಯ ಪೊಲೀಸ್ ಪೇದೆ ಬಸವರಾಜ್ ಇಪ್ಪರಗಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸುಲಿಗೆ ಮಾಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಬಾಣಸವಾಡಿಯ ಡಾನ್ ಬಾಸ್ಕೋ ಚರ್ಚ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೊಯ್ಸಳ ವಾಹನದ ಚಾಲಕರಾಗಿರುವ ಬಸವರಾಜ್ ನಿನ್ನೆ ಮಧ್ಯಾಹ್ನ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಅಡ್ಡಗಟ್ಟಿದ ದುರುಳರು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಬಳಿಕ ಮೊಬೈಲ್ನ್ನು ಸಹ ಕಸಿದುಕೊಳ್ಳಲು ಯತ್ನಿಸಿದ್ದಾರೆ.